ರಾಜ್ಯದಲ್ಲಿ ಒಣಗಿದ ಕೆರೆಗಳನ್ನು ಡಿನೋಟಿಫೈ ಮಾಡುವ ಸರಕಾರದ ನಿರ್ಧಾರ ನಾಚಿಕೆಗೇಡು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. ಹಿರಿಯ, ಅನುಭವಿ ನಾಯಕರಾದ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಇಂತಹ ನಿರ್ಧಾರ ನಾನು ನಿರೀಕ್ಷಿಸಿರಲಿಲ್ಲ. ಕೆರೆಗಳನ್ನು ಪುನರ್ಜಿವಗೊಳಿಸುವುದು ಬಿಟ್ಟು ಲೇಔಟ್ಗಳನ್ನಾಗಿ ಮಾಡಿದಲ್ಲಿ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ. ಕೆರೆಗಳನ್ನು ಲೇಔಟ್ ಮಾಡಬೇಕಾಗಿದ್ದಲ್ಲಿ ರಾಜಕಾಲುವೆ ಒತ್ತುವರಿ ಏಕೆ ತೆರುವುಗೊಳಿಸಬೇಕಿತ್ತು. ಸರಕಾರ ಕೆರೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ