ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಬಿಬಿಎಂಪಿ ಮಹಿಳಾ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದ ಆರೋಪ ಮಾಡಿದ್ದಾರೆ.ಎಚ್ ಬಿಆರ್ ಲೇಔಟ್ ನ ಮಹಿಳಾ ಅಧಿಕಾರಿ ಜಯಾ ಎಂಬವರನ್ನು ವರ್ಗಾವಣೆ ಮಾಡಿ 18 ದಿನಗಳಿಗೆ ಅಮಾನತು ಮಾಡಿದ್ದಾರೆ. ಆ ಸ್ಥಾನಕ್ಕೆ ತಮಗೆ ಬೇಕಾದ ಎಆರ್ ಒನನ್ನು ನೇಮಕ ಮಾಡಲು ಈ ರೀತಿ ಮಾಡಿದ್ದಾರೆ