ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಉತ್ತರ ಕರ್ನಾಟಕಕ್ಕೆ ಈವರೆಗೂ ಬಿಡುಗಡೆಯಾದ ಅನುದಾನದ ಬಗ್ಗೆ ನಾಳೆಯೇ ಶ್ವೇತಪತ್ರವನ್ನ ಹೊರಡಿಸಲಿ. ಶ್ವೇತಪತ್ರ ಹೊರಡಿಸಿದ್ದೇ ಆದಲ್ಲಿ ಎಲ್ಲವೂ ಹೊರಬೀಳಲಿದೆ. ರಾಜ್ಯದಲ್ಲಿ ರಚನೆಯಾಗಿರುವ 50 ತಾಲೂಕುಗಳಿಗೆ ಶೀಘ್ರವೇ 5 ಕೋಟಿ ಮೀಸಲಿಡಲಿ. ಮಹದಾಯಿ ಬಗ್ಗೆ ಮಾತನಾಡುವವರು ಭೂಮಿಪೂಜೆ ಮಾಡಿದಾಗ ಯಾಕೆ ಆಗಮಿಸಲಿಲ್ಲ? ಎಂದು ಪ್ರಶ್ನಿಸಿದರು.ಹಾಸನ ಮಂಡ್ಯ ಮೈಸೂರು ಭಾಗಕ್ಕೆ ಮಾತ್ರ ಬಜೆಟ್ ಮಂಡನೆಗೆ ಹಣ ತೆಗೆದುಕೊಂಡು ಹೋದಂತಾಗಿದೆ ಎಂದ ಅವರು, ಉತ್ತರ ಕರ್ನಾಟಕದ ಬಗ್ಗೆ ಸಿಎಂ