ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಇಡೀ ದೇಶವೇ ಬಿಜೆಪಿ ಮಯವಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ನಾವು ಎರಡೂ ರಾಜ್ಯಗಳಲ್ಲಿ ಗೆಲುವಿನತ್ತ ಮುಂದುವರೆದಿದ್ದೇವೆ. ಬಹುಮತ ಕೂಡ ಸಾಧಿಸುತ್ತೇವೆ. ಮೋದಿಯವರ ಸಾಧನೆ ನೋಡಿ ಜನರು ಮನ್ನಣೆ ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ತಳಮಳ ಶುರುವಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಇರಬಹುದು.