ಚಿಕ್ಕೋಡಿ : ಆಪ್ತರಿಂದ ಹತ್ಯೆಗೀಡಾಗಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಸಂಸ್ಕಾರ ಜೈನ ಧರ್ಮದ ಸಂಪ್ರದಾಯದಂತೆ ಭಾನುವಾರ (ಇಂದು) ಹಿರೇಕೋಡಿಯ ನಂದಿಪರ್ವತದ ಆಶ್ರಮದ ಬಳಿ ನೆರವೇರಿತು. ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರನ ಪುತ್ರ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಚಿತೆಗೆ ಹಾಲು, ಬೆಲ್ಲ, ಕೊಬ್ಬರಿ, ಕರ್ಪೂರ, ಗಂಧದ ಕಟ್ಟಿಗೆ, ಬಾದಾಮಿ, ತುಪ್ಪವನ್ನು ಎರೆಯಲಾಯಿತು. ಈ ವೇಳೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ವಾಮೀಜಿ ಹತ್ಯೆ ಖಂಡಿಸಿ ಸೋಮವಾರ ಮೌನ ಪ್ರತಿಭಟನೆಗೆ ಜೈನ