ಬೆಳಗಾವಿ : ಜನರು ನನ್ನನ್ನು ತೇಲು ಎಂದರೆ ತೇಲುತ್ತೇನೆ, ಮುಳುಗು ಎಂದರೆ ಮುಳುಗುತ್ತೇನೆ, ಮನೆಯಲ್ಲಿಯೇ ಇರು ಎಂದರೆ ಇರುತ್ತೇನೆ. ಸ್ಪರ್ಧೆ ಮಾಡು ಎಂದರೆ ಮಾಡುತ್ತೇನೆ ಎಂದು ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದ್ದಾರೆ. ಚಿಕ್ಕೋಡಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷಗಳಿಂದ ಜನರು ನಾನು ಹೇಳಿದಂತೆ ಕೇಳಿದ್ದಾರೆ. ಆದರೆ ಈಗ ಜನರು ಹೇಳಿದಂತೆ ನಾನು ಕೇಳಬೇಕಾಗಿದೆ. ಈ ಬಾರಿ ನಾನು ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಜನರು