ಬೆಂಗಳೂರು: ಆಂಬಿಡೆಂಟ್ ಕಂಪನಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ತೀರ್ಪು ಇಂದು ಹೊರಬೀಳಲಿದೆ.ನ್ಯಾಯಾಂಗ ಬಂಧನದಲ್ಲಿರುವ ರೆಡ್ಡಿ ಜಾಮೀನು ಅರ್ಜಿಯನ್ನು 6 ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸಿ ಇಂದು ತೀರ್ಪು ನೀಡಲಿದೆ. ಸದ್ಯಕ್ಕೆ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ನಿನ್ನೆ ನ್ಯಾಯಾಲಯದಲ್ಲಿ ರೆಡ್ಡಿ ಪರ ವಾದ ಮಂಡಿಸಿದ್ದ ನ್ಯಾಯವಾದಿ ಚಂದ್ರಶೇಖರ್ ಆರೋಪಿ ನಂ.1 ಸ್ಥಾನದಲ್ಲಿರುವ ಆಂಬಿಡೆಂಟ್ ಕಂಪನಿಯ