ಜನಾರ್ಧನ ರೆಡ್ಡಿ ಅವರಿಗೂ ಬಿಜೆಪಿಗೆ ಸಂಬಂಧವಿಲ್ಲ ಎಂದರೆ ಜನ ನಂಬಲ್ಲ- ಮಾಜಿ ಶಾಸಕ ತಿಪ್ಪೇಸ್ವಾಮಿ

ಚಿತ್ರದುರ್ಗ, ಗುರುವಾರ, 8 ನವೆಂಬರ್ 2018 (14:03 IST)

: ಬಿಜೆಪಿಗೂ ಜನಾರ್ಧನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ತಿಪ್ಪೇಸ್ವಾಮಿ ಜನಾರ್ದನ ರೆಡ್ಡಿ ಅವರಿಗೂ ಬಿಜೆಪಿಗೆ ಸಂಬಂಧವಿಲ್ಲ ಎಂದರೆ ಜನ ನಂಬಲ್ಲ ಎಂದು ಟಾಂಗ್ ನೀಡಿದ್ದಾರೆ.


ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಭಾಗಿಯಾಗಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಶಾಸಕನಾಗಿದ್ದ ನನಗೆ ಮೊಳಕಾಲ್ಮೂರು ಟಿಕೆಟ್ ನೀಡದೆ ಮೋಸ ಮಾಡಿದ್ದರು. ಬಳಿಕ ಶ್ರೀರಾಮುಲು ಪರ ಬಿಜೆಪಿ ನಾಯಕರು ಹಾಗು ಜನಾರ್ದನರೆಡ್ಡಿ ಸಾಮೂಹಿಕವಾಗಿ ನನ್ನ ವಿರುದ್ಧ ಚುನಾವಣಾ ಪ್ರಚಾರ ನಡೆಸಿ ಗೆದ್ದರು. ಆದರೆ ಇಂದು ಬಿಜೆಪಿಗೂ ರೆಡ್ಡಿ ಅವರಿಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ಇದನ್ನು ರಾಜ್ಯದ ಜನರು ನಂಬಲ್ಲ ಎಂದು ಹೇಳಿದ್ದಾರೆ.


ಇದೇ ವೇಳೆ ಶ್ರೀರಾಮುಲು ಅವರ ವಿರುದ್ಧ ವಾಗ್ದಾಳಿ ನಡೆಸಿದ ತಿಪ್ಪೇಸ್ವಾಮಿ ಅವರು, ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಶ್ರೀರಾಮುಲುನ ಗೆಲ್ಲಿಸಿದ್ದಾರೆ. ಶ್ರೀರಾಮುಲು ಮೂಲತಃ ಆಂಧ್ರಪ್ರದೇಶ ರಾಜ್ಯದವರು. ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಇಂದು ಚುನಾವಣೆಯಲ್ಲಿ ಜಯ ಪಡೆದಿದ್ದಾರೆ. ಈ ಮೂಲಕ ರಾಜ್ಯದ ನಾಯಕ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ನನಗೆ ಟಿಕೆಟ್ ನೀಡಿ ವಂಚನೆ ಮಾಡಿ ಮೋಸ ಮಾಡಿದ್ದ ಘಟನೆ ರಾಜ್ಯ ನಾಯಕರಿಗೆ ಗೊತ್ತಿರಲಿಲ್ವಾ ಎಂದು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾಲಕಿಯ ಬಾಯಲ್ಲಿ ಪಟಾಕಿ ಸಿಡಿಸಿದ ಭೂಪ; ಬಾಲಕಿ ಸ್ಥಿತಿ ಗಂಭೀರ

ಲಕ್ನೋ : ಯುವಕನೊಬ್ಬ ಮೂರು ವರ್ಷದ ಬಾಲಕಿಯ ಬಾಯಲ್ಲಿ ಪಟಾಕಿ ಸಿಡಿಸಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ...

news

ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ: ಸಚಿವ ಡಿಕೆಶಿ ಸ್ಪಷ್ಟನೆ

ಬೆಂಗಳೂರು: ಆಂಬಿಡೆಂಟ್ ಕಂಪನಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಮಾಜಿ ಸಚಿವ ...

news

ಈ ಬ್ರಾ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಿ!

ವಾಷಿಂಗ್ ಟನ್ : ನ್ಯೂಯಾರ್ಕ್​ನಲ್ಲಿ ನವೆಂಬರ್​ 8ರಂದು ನಡೆಯಲಿರುವ ವಿಕ್ಟೋರಿಯಾ ಸೀಕ್ರೆಟ್​ ಫ್ಯಾಷನ್​ ...

news

ಜನಾರ್ಧನ ರೆಡ್ಡಿಗಾಗಿ ಮುಂದುವರಿದ ಸಿಸಿಬಿ ಪೊಲೀಸರ ಶೋಧ

ಬಳ್ಳಾರಿ: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಡೀಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಗಣಿ ದಣಿ ಜನಾರ್ಧನ ...