ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಮಾಡಿರುವ ವ್ಯಂಗ್ಯಕ್ಕೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು, ರೆಡ್ಡಿಗೆ ಟಾಂಗ್ ನೀಡಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾತನಾಡಿರುವ ಆರ್.ವಿ.ದೇಶಪಾಂಡೆ, ಇಂತಹ ಹೇಳಿಕೆಯನ್ನ ಯಾರೇ ಆದರು ನೀಡಬಾರದು. ಪುತ್ರ ಶೋಕ ಅನ್ನುವುದು ತುಂಬಾ ನೋವಿನ ಸಂಗತಿ. ಇಂತಹ ವಿಷಯದಲ್ಲಿ ಟೀಕೆ ಮಾಡುವುದು ರಾಜಕೀಯವಾಗಿ ಒಳ್ಳೆಯ ಬೆಳವಣಿಗೆಯಲ್ಲ. ಉಪಚುನಾವಣೆಯಲ್ಲಿ ವ್ಯಕ್ತಿಗತ ಟೀಕೆಗೆ ರೆಡ್ಡಿ ಇಳಿದಿದ್ದಾರೆ. ಇದು ಸಹ