ಹುಬ್ಬಳ್ಳಿ ಗೆಳೆಯರು ನನ್ನ ಜೊತೆ ಬರ್ತಾರೆ ಅನ್ನೋದನ್ನ ಆ ದೇವರೇ ಬಲ್ಲ. ನನ್ನ ಮುಂದಿನ ನಡೆಯನ್ನ ಡಿಸೆಂಬರ್ 25 ರಂದು ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ನಿಗೂಢವಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಸಿದ್ಧಾರೂಢ ಹಾಗೂ ಗಳಗನಾಥರ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ತಂಬೂರಿ ಹೆಗಲಿಗೆ ಹಾಕಿಕೊಂಡು ಸಿದ್ಧಾರೂಢರ ಆಶೀರ್ವಾದ ಪಡೆದರು. ದರ್ಶನ ಬಳಿಕ