ಗಂಗಾವತಿ : ತಮ್ಮ ಪತ್ನಿ ಲಕ್ಷ್ಮಿ ಅರುಣ, ಪುತ್ರಿ ಬ್ರಹ್ಮಿಣಿ ಹಾಗೂ ಮೊಮ್ಮಕ್ಕಳಾದ ಭ್ರಮರ ಮತ್ತು ರಿಧಿರರೊಡನೆ ತುಂಗಭದ್ರಾ ನದಿಯಲ್ಲಿ ದೋಣಿ ವಿಹಾರ ನಡೆಸಿರುವ ಹಾಗೂ ಕಲ್ಲುಬಂಡೆಯ ಬಳಿ ಸೂರ್ಯಾಸ್ತ ವೀಕ್ಷಿಸುತ್ತಿರುವ ಫೋಟೋಗಳನ್ನು ಜನಾರ್ಧನ ರೆಡ್ಡಿ ಹಂಚಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬದೊಡನೆ ಆಹ್ಲಾದಕರ ಸಮಯ ಕಳೆದಿರುವ ಶಾಸಕ ಗಾಲಿ ಜನಾರ್ಧನ ರೆಡ್ಡಿ ತಮ್ಮ ಸಂತಸದ ಘಳಿಗೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಂಥಾ ಸುಂದರ ಕ್ಷೇತ್ರಕ್ಕೆ ಶಾಸಕನಾಗಿರುವುದು