ಮದುವೆಗಳಿಗೂ ತಟ್ಟಿದ ಜನತಾ ಕರ್ಪ್ಯೂ ಬಿಸಿ

ಬೆಂಗಳೂರು| pavithra| Last Updated: ಸೋಮವಾರ, 23 ಮಾರ್ಚ್ 2020 (11:27 IST)
ಬೆಂಗಳೂರು : ಕೊರೊನಾ ಸೋಂಕು ತಡೆಗೆ ಕರೆ ನೀಡಿದ ಜನತಾ ಕರ್ಪ್ಯೂ ನ ಬಿಸಿ ಮದುವೆಗಳಿಗೂ ತಟ್ಟಿದೆ ಎನ್ನಲಾಗಿದೆ.

ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಹಾಸನದಲ್ಲಿ ನಡೀತಿರೋ ಮದುವೆಗಳಲ್ಲಿ ಜನರೇ ಇಲ್ಲದಂತಾಗಿದೆ. ಆದಕಾರಣ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಾಡಿ ಮುಗಿಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

 

ಹಾಗೇ ಇನ್ನೊಂದೆಡೆ ಜನತಾ ಕರ್ಪ್ಯೂ ಮಧ್ಯೆ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಂದೆಯ ಅನಾರೋಗ್ಯ ಹಿನ್ನಲೆ ಮೈಸೂರಿನ ಪಡುವಾರಹಳ್ಳಿಯ ದೇವಾಲಯದಲ್ಲಿ ಸರಳವಾಗಿ ಮದುವೆ ಮಾಡಿ ಮುಗಿಸಲಾಗಿದೆ ಎನ್ನಲಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :