ಜಂತಕಲ್ ಗಣಗಾರಿಕೆ ಅಕ್ರಮ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಜುಲೈ 30 ರಂದು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಮಾಜಿ ಸಿಎಂ ಧರ್ಮಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇಂದು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದ ಧರ್ಮಸಿಂಗ್ ಪುತ್ರ, ತಂದೆಗೆ ಅನಾರೋಗ್ಯದಿಂದಾಗಿ ನಡೆಯಲು ಸಾಧ್ಯವಿಲ್ಲವಾದ್ದರಿಂದ ಜುಲೈ 30ರೊಳಗೆ ಅವರಿಂದ ಲಿಖಿತ ಉತ್ತರ ಕೊಡಿಸುವುದಾಗಿ ಮನವಿ ಮಾಡಿದ್ದಾರೆ.