ಸಚಿವ ಸ್ಥಾನ ಕೈತಪ್ಪಿದ್ದರಿಂದಾಗಿ ಯಾರ ಸಂಪರ್ಕಕ್ಕೆ ಸಿಗದಿರುವ ರಮೇಶ ಜಾರಕಿಹೊಳಿ ನಿಗೂಢ ಸ್ಥಳದಲ್ಲಿದ್ದರೆ, ಸದಾ ಜನರಿಂದ ಗಿಜುಗುಡುತ್ತಿದ್ದ ಅವರ ನಿವಾಸ ಕಳೆದೊಂದು ವಾರದಿಂದ ಯಾರೂ ಇಲ್ಲದೇ ಭಣಗುಡುತ್ತಿದೆ.ದಿನನಿತ್ಯ ಜನರಿಂದ ಗಿಜಗುಡುತ್ತಿದ್ದ ಮನೆ ಇಗ ಬಿಕೋ ಎನ್ನುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿರುವ ರಮೇಶ ಜಾರಕಿಹೊಳಿ ನಿವಾಸದಲ್ಲಿ ಈಗ ಜನರಿಲ್ಲ.ಕೇವಲ ಕಾರು ಚಾಲಕರು ಮತ್ತು ಮನೆಯಾಳುಗಳು ಬಿಟ್ರೆ ಈ ನಿವಾಸದಲ್ಲಿ ಯಾರು ಇಲ್ಲ. ಸಾಹುಕಾರರ ನಡೆಯನ್ನೆ ಇಡೀ ಕ್ಷೇತ್ರದ ಜನರು ಕಾಯುತ್ತಿದ್ದಾರೆ.