Widgets Magazine

ಮತ್ತೆ ಶುರುವಾಗಿದೆಯಾ ಕಾಂಗ್ರೆಸ್ ಜಟಾಪಟಿ?

ಚಿಕ್ಕೋಡಿ| Jagadeesh| Last Modified ಮಂಗಳವಾರ, 29 ಜನವರಿ 2019 (17:00 IST)
ಮತ್ತೆ ಶುರುವಾಗಿದೆಯಾ ಕಾಂಗ್ರೆಸ್ ಜಟಾಪಟಿ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಅತೃಪ್ತ ಮಹೇಶ್ ಕುಮಠಳ್ಳಿ ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ.

ಜನೇವರಿ 26 ರ ಗಣರಾಜ್ಯೋತ್ಸವ ಮುಗಿಸಿ ಮತ್ತೆ ನಾಪತ್ತೆ ಆಗಿರುವ ರಮೇಶ್ ಜಾರಕಿಹೋಳಿ ಬೆಂಬಲಿಗ ಮಹೇಶ್ ಕುಮಠಳ್ಳಿ ಅವರ ಕ್ರಮದಿಂದ ರಾಜಕೀಯ ವಲಯದಲ್ಲಿ ಚರ್ಚೆಗಳು ಮತ್ತೆ ಶುರುವಾಗಿವೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ‌ ಸಂಚಲನ ಸೃಷ್ಟಿಯಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಮಹೇಶ್ ಕುಮಠಳ್ಳಿ, ಈ ಹಿಂದೆ ಹತ್ತು ದಿನಗಳ ಕಾಲ ಮುಂಬಯಿ ಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಶಾಸಕ ಮಹೇಶ್ ಕುಮಠಳ್ಳಿ ತಾವು ಬೆನ್ನು ನೋವಿನ ಚಿಕಿತ್ಸೆಗೆ ತೆರಳಿದ್ದಾಗಿ ತಿಳಿಸಿದ್ದರು. ಸದ್ಯ ಕೊಲ್ಹಾಪುರದಲ್ಲಿ ಇರುವುದಾಗಿ ಬಲ್ಲ ಮೂಲಗಳ ಮಾಹಿತಿ ಇದೆ.


ಇದರಲ್ಲಿ ಇನ್ನಷ್ಟು ಓದಿ :