ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಸಾವಿನ ಸುತ್ತ ಎದ್ದಿರುವ ಅನುಮಾನಗಳಿಗೆ ಅಂತ್ಯವಾಡಲು ರಚಿಸಿರುವ ಸಮಿತಿ ಇದೀಗ, ಶಶಿಕಲಾ ವಿಚಾರಣೆಗೆ ಸಿದ್ಧತೆ ನಡೆಸಿಕೊಂಡಿದೆ.ಜಯಲಲಿತಾ ಪರಮಾಪ್ತೆಯಾಗಿದ್ದ ಶಶಿಕಲಾ, ಜಯಲಲಿತಾ ಆಸ್ಪತ್ರೆ ಸೇರಿದ 72 ದಿನಗಳ ಕಾಲ ಅವರೊಂದಿಗೆ ಆಸ್ಪತ್ರೆಯಲ್ಲಿದ್ದರು. ಆದ್ದರಿಂದ ಅವರ ವಿಚಾರಣೆ ಹಾಗೂ ಹೇಳಿಕೆ ಭಾರಿ ಮಹತ್ವ ಪಡೆದುಕೊಳ್ಳುವುದರಿಂದ, ಅರ್ಮುಗಂ ಸ್ವಾಮಿ ನೇತೃತ್ವದ ಸಮಿತಿ, ಶಶಿಕಲಾ ಅವರ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕರ್ನಾಟಕ ಕಾರಾಗೃಹ ಇಲಾಖೆಗೆ