ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ ಎಂದ ಜಯಶ್ರೀ

ಹುಬ್ಬಳ್ಳಿ| Jagadeesh| Last Modified ಮಂಗಳವಾರ, 24 ಜುಲೈ 2018 (15:58 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ನನ್ನ ಮಗನ ಪಾತ್ರವಿಲ್ಲ. ನನ್ನ ಮಗ ಅಮಾಯಕ ಎಂದು
ಪತ್ರಕರ್ತೆ ಗೌರಿಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ
ಅಮಿತ್ ಬದ್ದಿಯ ತಾಯಿ ಕಣ್ಣೀರು ಹಾಕಿದ್ದಾರೆ.

ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನಿವಾಸಿಗಳಾದ ಅಮೀತ್ ರಾಮಚಂದ್ರ ಬದ್ದಿ ಹಾಗೂ ಗಣೇಶ ಮಿಸ್ಕಿನ್ ಎಂಬುವವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅಮೀತ್ ಕುಟುಂಬಸ್ಥರು ತಮ್ಮ ಮಗನ ಬಂಧಿಸಿದಕ್ಕೆ ಕಣ್ಣೀರು ಹಾಕಿದರು. ಅಮಿತ್ ನ ತಾಯಿ ಜಯಶ್ರೀ ಬದ್ದಿ ಕಣ್ಣೀರು ಹಾಕಿದ್ದಾರೆ. ಎಸ್ ಐಟಿ ಅಧಿಕಾರಿಗಳು ಯಾವ ಕಾರಣಕ್ಕೆ ಬಂಧಿಸಿದ್ದಾರೋ ನಮಗೆ ಗೊತ್ತಿಲ್ಲ. ನಮ್ಮ ಮನೆಯ ಜವಾಬ್ದಾರಿಯನ್ನ ಅಮಿತ್ ಹೊತ್ತಿದ್ದ. ನಮ್ಮ ಮಗ ಅಂತಾ ತಪ್ಪು ಮಾಡುವಂತವನಲ್ಲ.

ಶನಿವಾರ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿಲ್ಲ.
ನಮಗೆ ಇದೆಲ್ಲ ಗೊತ್ತಾಗಿದ್ದು ಶನಿವಾರ ರಾತ್ರಿ.
ನಮ್ಮ ಮಗನನ್ನು ಪೊಲೀಸರು ಸುಮ್ಮನೆ ಬಂಧನ ಮಾಡಿದ್ದಾರೆ. ಹತ್ಯೆ ಮಾಡುವಂತ ಕೆಲಸ ನಮ್ಮ ಮಗ ಮಾಡುವುದಿಲ್ಲ ಎಂದು ಕುಟುಂಬಸ್ಥರು‌‌ ಕಣ್ಣೀರು ಸುರಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :