ಮೈಸೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೆಲವೆಡೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳುವುದರ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ತಪ್ಪಾಗಿದೆ. ಚುನಾವಣೆಯಲ್ಲಿ ಜೊತೆಯಾಗಿ ಮಾಡಬೇಕಿತ್ತು. ಈ ಬಾರಿ ಕಾಂಗ್ರೆಸ್ ನೊಂದಿಗೆ ಸೇರಿ ಬಿಜೆಪಿಯನ್ನು ಮಣಿಸಲು ನಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೆವು. ಆದರೆ ಉದ್ದೂರು ಪಂಚಾಯಿತಿ ಸೇರಿ ಕೆಲವೆಡೆ