RSS ಜೊತೆ ಜೆಡಿಎಸ್ ಮೈತ್ರಿ?: ಸಿದ್ದರಾಮಯ್ಯ ಹೊಸ ಬಾಂಬ್

ಬೆಂಗಳೂರು| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (21:17 IST)
ಜೆಡಿಎಸ್ ಪಕ್ಷದ ವಿರುದ್ಧ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.


ಜೆಡಿಎಸ್ ನ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅವಕಾಶಕ್ಕಾಗಿ ಜೆಡಿಎಸ್ ನವರು ಆರ್ ಎಸ್ ಎಸ್ ಜೊತೆಗೆ ಸೇರಿಕೊಳ್ಳಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಅಧಿಕಾರಕ್ಕಾಗಿ ಜೆಡಿಎಸ್ ನವರು ಬಿಜೆಪಿಯವರ ಜೊತೆಗೆ ಹೋಗುತ್ತಾರೆ. ಆರ್ ಎಸ್ ಎಸ್ ಜೊತೆಗೆ ಸೇರಿಕೊಂಡರೂ ಸೇರಿಕೊಳ್ಳಬಹುದು ಎಂದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :