Widgets Magazine

ಹಾಸನದಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ

ಹಾಸನ| pavithra| Last Modified ಭಾನುವಾರ, 15 ಸೆಪ್ಟಂಬರ್ 2019 (09:35 IST)
: ಹಾಸನದಲ್ಲಿ ನಾಯಕರ ಫೋಟೊ, ನಾಮಫಲಕ ವಿಚಾರಕ್ಕೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ನಡೆದಿದೆ.
ಹಾಸನದ ಹೇಮಾವತಿ ಪ್ರತಿಮೆ ಬಳಿ ಮೇಲ್ಚಾವಣಿ ಕಾಮಗಾರಿ ಸ್ಥಳದಲ್ಲಿ ಬಿಜೆಪಿ ಶಾಸಕ ಹೆಸರು ಹಾಗು ಮತ್ತೊಂದು ಭಾಗದಲ್ಲಿ ದೇವೇಗೌಡರ ಫೋಟೊ ಹಾಕಲಾಗಿತ್ತು. ದೇವೇಗೌಡರ ಫೋಟೊ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದೇವೇಗೌಡರ ಫೋಟೊ ತೆರವುಗೊಳಿಸಲಾಗಿದೆ.


ದೇವೇಗೌಡರ ಫೋಟೊ ತೆರವುಗೊಳಿಸಿರುವುದಕ್ಕೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಶಾಸಕರು ಕೀಳುಮಟ್ಟದ ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಹಿನ್ನಲೆಯಲ್ಲಿ ಹಾಸನದ ಹೇಮಾವತಿ ಪ್ರತಿಮೆ ಬಳಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :