ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ವರ್ಷದ ಮೇಲೆ ಮೂರ್ನಾಲ್ಕು ತಿಂಗಳು ಬಾಕಿಯಿವೆ. ಅದಾಗಲೆ ಬಿಜೆಪಿ, ಜೆಡಿಎಸ್ ಚುನಾವಣೆಯ ಪೂರ್ವ ತಯಾರಿಯನ್ನು ಸದ್ದಿಲ್ಲದೆ ಮಾಡಿಕೊಳ್ಳುತ್ತಿವೆ. ಪ್ರಹ್ಲಾದ ಜೋಶಿ ಅವರ ಬಿಜೆಪಿ ರಾಜ್ಯಾಧ್ಯಕ್ಷ ಅವಧಿ ಮುಕ್ತಾಯವಾಗುತ್ತಿದ್ದಂತೆ ಹೈಕಮಾಂಡ್ ಮಾಸ್ ಲೀಡರ್ ಎಂದೆನಿಸಿಕೊಂಡಿರುವ ಯಡಿಯೂರಪ್ಪ ಅವರನ್ನು ಆ ಹುದ್ದಿಗೆ ತಂದು ಕುಳ್ಳಿರಿಸಿತು. ಹುದ್ದೆಯಲಂಕರಿಸಿದ ಯಡಿಯೂರಪ್ಪ ವಾರದೊಳಗೆ ಬಿಜೆಪಿಯ ಎಲ್ಲ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿದರು. ಇದು ರಾಜ್ಯ ಬಿಜೆಪಿಯ ಮುಂಬರುವ