ಇಂದು ಮತ್ತೆ ನಾಳೆ ಮೈಸೂರಿನಲ್ಲಿ ಜೆಡಿಎಸ್ ಸಂಘಟನಾ ಕಾರ್ಯಾಗಾರ ನಡೆಯಲಿದೆ. ತೆಲಂಗಾಣ ಸಚಿವರು ಕಾರ್ಯಾಗಾರದಲ್ಲಿ ಭಾಗಿಯಾಗುತ್ತಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಪುತ್ರ ಕೆ.ಟಿ.ರಾಮರಾವ್ ಸೇರಿದಂತೆ ಎಂಟು ಮಂದಿ ಸಚಿವರು ಭಾಗಿ ಮೈಸೂರಿಗೆ ಆಗಮಿಸಿದ್ದಾರೆ. ಜೆಡಿಎಸ್, ಬಿಆರ್ಎಸ್ ಮೈತ್ರಿ, ಚುನಾವಣಾ ಪ್ರಚಾರ ಕುರಿತಂತೆ ಮಹತ್ವದ ಸಭೆ ನಡೆಯಲಿದ್ದು, ಆಂಧ್ರ, ತೆಲಾಂಗಣ ಗಡಿ ಭಾಗದಲ್ಲಿ ಯಾವ ವಿಚಾರಗಳಿಗೆ ಆದ್ಯತೆ ಕೊಡಬೇಕು, ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಬೆಂಬಲ ನೀಡುವ ಬಗ್ಗೆ ಗಂಭೀರ ಚರ್ಚೆ