ರಾಯಚೂರು : ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ದೇವೇಗೌಡರನ್ನಾಗಲಿ, ಕುಮಾರಣ್ಣನನ್ನಾಗಲಿ ಜೆಡಿಎಸ್ ಪಕ್ಷವನ್ನಾಗಲಿ ಏನೂ ಮಾಡಲು ಆಗಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುಡುಗಿದ್ದಾರೆ.ರಾಯಚೂರಿನ ಸಿಂಧನೂರಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಹುಟ್ಟುಹಬ್ಬ ಸಮಾರಂಭ ಹಿನ್ನೆಲೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯಕ್ಕೆ ಅಮಿತ್ ಶಾ ಅಥವಾ ಯಾರೇ ಬಂದ್ರೂ ಜೆಡಿಎಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ.ಇಂದಿನಿಂದ ಕುಮಾರಣ್ಣ ಬೀದರ್ನಿಂದ ಯಾತ್ರೆ