ಜೆಡಿಎಸ್ ಬಿಜೆಪಿಯ ಬಿ ಟೀಂ. ಎರಡೂ ಪಕ್ಷಗಳು ಅಣ್ತಮ್ಮ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯ ನಂತರ ಅಧಿಕಾರದ ಆಸೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು, 2019ರ ಲೋಕಸಭೆ ಚುನಾವಣೆ ವೇಳೆ ಇದು ಮುಂದುವರೆದಿತ್ತು. ಧರ್ಮ ಸಿಂಗ್ ಸರ್ಕಾರ ವಿದ್ದಾಗ ನೀವು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರಿ, ನಮ್ಮ ಜೊತೆ ಒಂದೇ ಒಂದು ಸಲ ಮೈತ್ರಿ ಮಾಡಿಕೊಂಡಿದ್ದು ಮಿಕ್ಕೆಲ್ಲಾ