ಚಿತ್ರದುರ್ಗ : ಬಿಜೆಪಿಗೆ ಬೂಸ್ಟ್ ಕೊಡಲು ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ, ಚಿತ್ರದುರ್ಗ, ಹೊಸಪೇಟೆ, ಸಿಂಧನೂರಿನಲ್ಲಿ ಆಯೋಜಿಸಿದ್ದ ಸಮಾವೇಶಗಳಲ್ಲಿ ಪಾಲ್ಗೊಂಡು ಮತಬೇಟೆ ನಡೆಸಿದರು. ಇದೇ ವೇಳೆ ಕಾಂಗ್ರೆಸ್, ಜೆಡಿಎಸ್ ಉಗ್ರವಾದಿಗಳ ಪರವಿದೆ ಎಂಬ ಗಂಭೀರ ಆರೋಪ ಮಾಡಿದರು. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಕಾಂಗ್ರೆಸ್ನವರು ಹೆಮ್ಮೆ ಪಡುವ ಬದಲು ಅಪಮಾನ ಮಾಡಿದರು ಎಂದು ದೂಷಿಸಿದ್ರು.ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡವರಿಗೆ ತಲುಪುವ ಯೋಜನೆಗಳು ನಿಲ್ಲುತ್ತವೆ. ಆದ್ದರಿಂದ ಕರ್ನಾಟಕದ ಅಭಿವೃದ್ಧಿಗಾಗಿ