ಟೀ ಕುಡಿಯುತ್ತ ಕುಳಿತಿದ್ದ ಮಾಜಿ ಮೇಯರ್ ಹಾಗೂ ಹಾಲಿ ಜೆಡಿಎಸ್ ಕಾರ್ಪೋರೇಟರ್ ನನ್ನು ಕಣ್ಣಿಗೆ ಖಾರದ ಪುಡಿ ಎರಚಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.ತುಮಕೂರು ನಗರದ ಬಟವಾಡಿ ಸಮೀಪ ಈ ಘಟನೆ ನಡೆದಿದೆ. ಟೀ ಕುಡಿಯುತ್ತಿದ್ದ ಕಾರ್ಪೋರೇಟರ್ ರವಿಕುಮಾರ ಅಲಿಯಾಸ್ ಗಡ್ಡ ರವಿ ಮೇಲೆ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಖಾರದ ಪುಡಿ ತೆಗೆದು ರವಿಕುಮಾರ ಕಣ್ಣಿಗೆ ಎರಚಿದ್ದಾನೆ. ಆಗ ರವಿಕುಮಾರ ಮತ್ತು ಆತನ ಸ್ನೇಹಿತ ಇಬ್ಬರೂ ಓಡಲಾರಂಭಿಸಿದ್ದಾರೆ.