ಜೆಡಿಎಸ್ ವರಿಷ್ಠ ದೇವೇಗೌಡರ ನಂತರ ಜೆಡಿಎಸ್ ಪಕ್ಷದ ಅಸ್ತಿತ್ವ ಉಳಿಯುವುದಿಲ್ಲ ಎಂದು ಜೆಡಿಎಸ್ ಉಚ್ಚಾಟಿತ ಶಾಸಕ ಜಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಎಚ್.ಡಿ ರೇವಣ್ಣನೇ ಅರ್ಜಿ ಹಾಕಿ ಟಿಕೆಟ್ ತೆಗೆದುತೊಳ್ಳುವಂತಹ ಪರಿಸ್ಥಿತಿ ಬಂದಿದೆ. ರೇವಣ್ಣ ಕುಮಾರಣ್ಣನನ್ನು ಮಾತಿನಲ್ಲಿಯೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಕನಸಿನಲ್ಲೂ ಯೋಚಿಸಿರಲಿಲ್ಲ. ನಾನು ಜೆಡಿಎಸ್ ಪಕ್ಷಕ್ಕೆ ದುಡಿದಿದ್ದೇನೆ. ಜೆಡಿಎಸ್ ಪಕ್ಷದಿಂದ ನನಗೆ ಏನೂ ದೊರೆತಿಲ್ಲ ಎಂದರು.