ಸಿದ್ದರಾಮಯ್ಯ ಪಾಲಿಗೆ ಜೆಡಿಎಸ್ ಮೊದಲ ಶತ್ರು- ಸಿಎಂ ಕುಮಾರಸ್ವಾಮಿ ಕಿಡಿ

ಬೆಂಗಳೂರು| pavithra| Last Modified ಭಾನುವಾರ, 25 ಆಗಸ್ಟ್ 2019 (13:33 IST)
ಬೆಂಗಳೂರು : ಪಾಲಿಗೆ ಜೆಡಿಎಸ್ ಮೊದಲ ಶತ್ರು. ಆದ್ದರಿಂದ ಮೈತ್ರಿ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಆಂಗ್ಲ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕುಮಾರಸ್ವಾಮಿ,  ‘ಸಿದ್ದರಾಮಯ್ಯ ಪಾಲಿಗೆ ಬಿಜೆಪಿಗಿಂತಲೂ ಜೆಡಿಎಸ್ ದೊಡ್ಡ ಶತ್ರು. ನನ್ನ ನೇತೃತ್ವದ ಸರ್ಕಾರ ರಚನೆ ಬಗ್ಗೆ ಸಿದ್ದರಾಮಯ್ಯ ಗೆ ಮನಸಿರಲಿಲ್ಲ. ಪ್ರತಿದಿನ ಸಿದ್ದರಾಮಯ್ಯ ರಿಂದ ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿತ್ತು. ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಬರಲಿ ಅಂತಾ ಬಯಸಿದ್ರು. ನಾನು ಸಿಎಂ ಆಗಿರೋದು ಕಾಂಗ್ರೆಸ್ ಗೆ ಒಳ್ಳೆಯದಲ್ಲ ಅಂತಾ ಭಾವಿಸಿದ್ರು. ಇದಕ್ಕಾಗಿ ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಅಂತ ಹೇಳಿಸೋ ಮೂಲಕ ನನ್ನ ಧೃತಿಗೆಡಿಸೋ ಯತ್ನ ನಡೆಸುತ್ತಿದ್ದರು ಎಂದು ಹೇಳಿದ್ದಾರೆ.


ಹಾಗೇ ನನ್ನ ಮೊದಲ ಶತ್ರು ಬಿಜೆಪಿಯಲ್ಲ ಸಿದ್ದರಾಮಯ್ಯ ಎಂದು ಟಾಂಗ್ ನೀಡಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ರಚನೆಯಾಗೋದರ ಹಿಂದೆ ಅವಕಾಶಕ್ಕೆ ಕಾದಿರೋ ಸಿದ್ದರಾಮಯ್ಯ ಅವರು ಸರ್ಕಾರ ಮುನ್ನೆಡೆಸಲು ಬಿಎಸ್ ವೈ ವಿಫಲವಾದ್ರೆ ತಮಗೆ ಮತ್ತೊಂದು ಚಾನ್ಸ್ ಸಿಗಲಿದೆ. ಸಿಎಂ ಆಗಲು ಮತ್ತೊಂದು ಅವಕಾಶ ಸಿಗಬಹುದು ಅಂತಾ ಲೆಕ್ಕಾಚಾರ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :