‘ಜೆಡಿಎಸ್ ಫುಲ್ ಗರಂ: ಶಾಸಕರನ್ನು ಅನರ್ಹಗೊಳಿಸಲು ದೂರು’

ಬೆಂಗಳೂರು, ಗುರುವಾರ, 11 ಜುಲೈ 2019 (19:18 IST)

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಜೆಡಿಎಸ್ ನ ಮೂವರ ಶಾಸಕರನ್ನ ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್ ಗೆ ದೂರು ಸಲ್ಲಿಸಿದೆ.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಜೆಡಿಎಸ್ ನ ಮೂವರ ವಿರುದ್ಧ ಪಕ್ಷ ಗಂಭೀರ ಕ್ರಮಕ್ಕೆ ಮುಂದಾಗಿದೆ.

ಜೆಡಿಎಸ್ ಮೂವರು ಶಾಸಕರ ಅನರ್ಹತೆಗೆ ಕೋರಿ ಸ್ಪೀಕರ್ ಅವರಿಗೆ ಜೆಡಿಎಸ್ ನಾಯಕರು ದೂರು ಸಲ್ಲಿಕೆ ಮಾಡಿದ್ದಾರೆ.

ಜೆಡಿಎಸ್ ಪರ ವಕೀಲ, ವಕೀಲರ ಸಂಘದ ಅಧ್ಯಕ್ಷ ರಂಗನಾಥ್ ಅವರು ಸ್ಪೀಕರ್ ಕಚೇರಿ ಆಗಮಿಸಿದರು. ಹುಣಸೂರು ಶಾಸಕ ಹೆಚ್.ವಿಶ್ವನಾಥ್, ಕೆಆರ್ ಪೇಟೆ ಶಾಸಕ ನಾರಾಯಣ ಗೌಡ ಹಾಗೂ ಮಹಾಲಕ್ಷ್ಮೀ ಲೇಔಟ್ ಗೋಪಾಲಯ್ಯ ವಿರುದ್ಧ ದೂರು ಸಲ್ಲಿಸಲಾಗಿದೆ.

ಮಾಜಿ ಶಾಸಕ ಕೋನರೆಡ್ಡಿ, ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಮತ್ತಿತರರು ದೂರು ಸಲ್ಲಿಸುವ ವೇಳೆ ಇದ್ದರು.

 

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತೃಪ್ತರ ಶಾಸಕರಿಗೆ ಫುಲ್ ಟೆನ್ಶನ್: ಸುಪ್ರೀಂ ಮೊರೆ ಹೋದ ಸ್ಪೀಕರ್

ವಿಧಾನಸಭಾಧ್ಯಕ್ಷನಾದ ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ಕಾನೂನು ಹಾಗೂ ನಿಯಮಗಳ ಪ್ರಕಾರವೇ ...

news

ಬಿಜೆಪಿಗೆ ಸವಾಲ್ - ವಿಶ್ವಾಸಮತ ಎದುರಿಸಲು ಸಿದ್ಧವೆಂದ ಮೈತ್ರಿಪಕ್ಷ

ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆ ಪ್ರಹಸನ ಮುಗಿದಿಲ್ಲ. ಈ ನಡುವೆ ಬಿಜೆಪಿಗೆ ವಿಶ್ವಾಸವಿದ್ದರೆ ಮೈತ್ರಿ ...

news

ಬಿಜೆಪಿ ಲಾಬಿ, ಅಧಿಕಾರ ನನಗೆ ಬೇಕಿಲ್ಲ ಎಂದ ಕೈ ಶಾಸಕ

ಮೈತ್ರಿ ಸರಕಾರದ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ...

news

ರೆಬಲ್ ಶಾಸಕರ ಹೈಡ್ರಾಮಾ ನಡುವೆ ಕಂಗಾಲಾದ ರೈತರು

ಮೈತ್ರಿ ಸರಕಾರದಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡಿ ಹೈಡ್ರಾಮಾಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ...