ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಸಚಿವ

ಮೈಸೂರು, ಬುಧವಾರ, 1 ಮೇ 2019 (18:51 IST)

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಮೈತ್ರಿಯಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಜೆಡಿಎಸ್- ಕಾಂಗ್ರೆಸ್ ಜಿದ್ದಾಜಿದ್ದಿನ ಚುನಾವಣೆ ನಡೆಸಿದ್ದವು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಕಾಂಗ್ರೆಸ್‌ಗೆ ಹಾಕಿದ್ದಾರೆ. ಜೆಡಿಎಸ್‌ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ.

ಉದ್ಬೂರು ಗ್ರಾಮ ಪಂಚಾಯಿತಿ ಸೇರಿದಂತೆ ಕೆಲವು ಕಡೆ ಹೀಗಾಗಿದೆ ಅಂತ ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ. ಮೈತ್ರಿ ಹಿನ್ನೆಡೆ ಒಪ್ಪಿಕೊಂಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು.

ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ನಿಜ, ಸಚಿವ ಜಿ.ಟಿ.ದೇವೇಗೌಡರು ‌ನಿಜ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಹಾಗೂ‌ ಕಾಂಗ್ರೆಸ್ ಎರಡೂ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ಬಹಿರಂಗವಾಗಿ ಜಿ.ಟಿ.ದೇವೇಗೌಡ ಒಪ್ಪಿಕೊಂಡಿರೋದರಿಂದ ತಮ್ಮ ಸೋಲನ್ನ ತಾವೇ ಒಪ್ಪಿಕೊಂಡಿದ್ದಾರೆ. ಹೀಗಂತ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೈ ಎಲೆಕ್ಷನ್: ಕೈ ಅಭ್ಯರ್ಥಿ ಟೆಂಪಲ್ ರನ್

ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ...

news

ಸಿದ್ರಾಮಯ್ಯ ಕರೆದ್ರೂ ಬಿಜೆಪಿ ಬಿಡೋಲ್ಲ ಎಂದು ಶಾಕ್ ನೀಡಿದ ಶಾಸಕ

ನಾನು ಕಾಂಗ್ರೆಸ್ ಸೇರುವ ಕುರಿತು ಹರಿದಾಡುತ್ತಿರುವ ಆಡಿಯೋ ಸುಳ್ಳು.ನಾನು ಬಿಜೆಪಿ ಕಾರ್ಯಕರ್ತ.ಯಡಿಯೂರಪ್ಪ ...

news

ವಿಡಿಯೋದಲ್ಲಿ ಬೆತ್ತಲಾದ ಟ್ರಾಫಿಕ್ ಪೊಲೀಸರ ಕರ್ಮಕಾಂಡ

ಟ್ರಾಫಿಕ್ ಪೊಲೀಸರ ಕರ್ಮಕಾಂಡ ಮತ್ತೆ ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

news

ರಾಜ್ಯದ ಗಡಿ ಜಿಲ್ಲೆ ಅಕ್ಷರಶಃ ನಡುಗಿದೆ; ಕಾರಣ?

ರಾಜ್ಯದ ಗಡಿ ಜಿಲ್ಲೆಯೊಂದು ಅಕ್ಷರಶಃ ನಡುಗಿದ್ದು ಅಪಾರ ನಷ್ಟಕ್ಕೆ ಒಳಗಾಗಿದೆ.