ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ ಮುಂದುವರಿದಿದೆ. ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶವನ್ನು ಜನರು ಹೊರಹಾಕುತ್ತಿದ್ದಾರೆ.ಮಂಡ್ಯ ಅಣ್ಣತಮ್ಮಂದಿರ ಆಸ್ತಿ ಭಾಗ ಆಗಿದೆ. ಮಂಡ್ಯ ಚಿಕ್ಕೋನ್ಗೆ, ಹಾಸನ ದೊಡ್ಡೋನ್ಗೆ. ಅಚ್ಚುಪಾಲು ರಾಮನಗರ. ಗೋ ಬ್ಯಾಕ್ ನಿಖಿಲ್ ಕುಮಾರಸ್ವಾಮಿ ವಿ ಸಪೋರ್ಟ್ ಅಂಬಿ ಫ್ಯಾಮಿಲಿ ಅಂತೆಲ್ಲ ಪೋಸ್ಟ್ ಗಳನ್ನು ಹರಿಬಿಡಲಾಗುತ್ತಿದೆ. ಜೆಡಿಎಸ್ ಅಂದರೆ ಜಸ್ಟ್ ಫಾರ್ ದೇವೇಗೌಡ