ಜಿಲ್ಲೆಯಲ್ಲಿ ನನ್ನನ್ನು ಕಡೆಗೆಣಿಸಲಾಗಿರುವುದಕ್ಕೆ ಬೇಸರವಾಗಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಸಾ.ರಾ.ಮಹೇಶ್ ವಿರುದ್ಧ ಭಿನ್ನಮತದ ಕಹಳೆ ಮೊಳಗಿಸಿದ್ದಾರೆ. ಪಕ್ಷದ ಸಭೆಯ ಕುರಿತು ಮಾಹಿತಿ ನೀಡುತ್ತಿಲ್ಲ. ಮೇಯರ್ ವಿಚಾರದಲ್ಲೂ ನನ್ನ ಅಭಿಪ್ರಾಯ ಪಡೆದಿಲ್ಲ ಈ ಕುರಿತು ದೇವೇಗೌಡರೊಂದಿಗೆ ಮಾತನಾಡಿದ್ದೇನೆ. ಜೂನ್ 16 ರಂದು ದೇವೇಗೌಡರಿಗೆ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲೆಗೆ ಸೇರಿದ ಪ್ರತಿಯೊಂದು ವಿಷಯದಲ್ಲೂ ಕುಮಾರಸ್ವಾಮಿ ಮತ್ತು ಕೆ.ಆರ್.ನಗರ