ನೀರಿಗಾಗಿ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಇಂಜಿನಿಯರೊಬ್ಬರನ್ನು ಎಳೆದಾಡಿ, ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ರೈತರ ಬೆಳೆಗೆ ಅಗತ್ಯ ನೀರು ಬಿಡದ ಹಿನ್ನೆಲೆಯಲ್ಲಿ ನಾರಾಯಣಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಹೇಮಾವತಿ ಡ್ಯಾಂ ಯೋಜನೆಯ ಇಂಜಿನಿಯರ್ ಕಚೇರಿಗೆ ತೆರಳಿ, ಇಂಜಿನಿಯರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಟೇಬಲ್ ಮೇಲಿದ್ದ ಪುಸ್ತಕಗಳನ್ನು ಚೆಲ್ಲಾಡಿದ್ದಾರೆ. ನೀರು ಬಿಡುವ ಕುರಿತು ಇಂಜಿನಿಯರ್ ಜೊತೆ ಚರ್ಚಿಸುತ್ತಿದ್ದ ನಾರಾಯಣಗೌಡ ಅವರು ಏಕಾಏಕಿ