ಹಾಸನ ವಿಧಾನಸಭಾ ಕ್ಷೇತ್ರದ JDS ಟಿಕೆಟ್ ಗೊಂದಲ ಮುಂದುವರಿದಿದೆ.. ಹಾಸನದಲ್ಲಿ JDS ಸೋತ್ರೂ ಪರವಾಗಿಲ್ಲ ಸ್ವರೂಪ್ಗೆ ಟಿಕೆಟ್ ಬೇಡ ಅಂತ ಮಾಜಿ ಸಚಿವ H.D. ರೇವಣ್ಣ ಹೇಳಿದ್ದಾರೆ ಎನ್ನಲಾಗ್ತಿದೆ. ಸ್ವರೂಪ್ಗೆ ಟಿಕೆಟ್ ತಪ್ಪಿಸಲೇಬೇಕೆಂಬ ಹಠಕ್ಕೆ ಮಾಜಿ ಸಚಿವ ರೇವಣ್ಣ ಬಿದ್ದಿದ್ದಾರೆ.. ಮಾಜಿ ಸಿಎಂ H.D. ಕುಮಾರಸ್ವಾಮಿ ಮೂಲಕ ಟಿಕೆಟ್ಗೆ ಲಾಬಿ ಮಾಡ್ತಿರೋದಕ್ಕೆ ಸ್ವರೂಪ್ ಮೇಲೆ ರೇವಣ್ಣ ಕೆಂಡ ಕಾರ್ತಿದ್ದಾರೆ.. ಸ್ವರೂಪ್ ಬೆನ್ನಿಗೆ ನಿಂತಿರೋ ಕುಮಾರಸ್ವಾಮಿ ಹೇಳಿಕೆಗಳಿಂದ ರೇವಣ್ಣ ಸಿಟ್ಟಾಗಿದ್ದಾರೆ ಎನ್ನಲಾಗಿದೆ..