ಎರಡೂ ರಾಷ್ಟ್ರೀಯ ಪಕ್ಷಗಳು ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿವೆ. ಪ್ರಾದೇಶಿಕ ಪಕ್ಷವಾಗಿ ನಾವು ಸುಮ್ಮನಿದ್ದರೆ ಹಿಂದೆ ಬೀಳುತ್ತೇವೆ. ಹೀಗಾಗಿ, ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡರು, ಆರ್ಥಿಕವಾಗಿ ಪಕ್ಷ ದುರ್ಬಲವಾಗಿರುವುದು ನಿಜ. ಆದರೆ, ಸಾಮೂಹಿಕ ಹೋರಾಟ ನಡೆಸುತ್ತೇವೆ. ಈ ಹಿಂದೆ ಎಸ್.ಎಂ. ಕೃಷ್ಣ ಪಾಂಚಜನ್ಯ ಊದಿದ್ದರು. ಅವರು ಪಾಂಜಜನ್ಯಾದರೂ ಊದಲಿ, ಶಂಕನಾದರೂ ಊದಲಿ