ಮೈಸೂರು : ದೊಡ್ಡ ಗೌಡರ ಮನೆಯ ಹಾಸನ ಜಿಲ್ಲೆಯ ಪಾಲಿಟಿಕ್ಸ್ ಈಗ ಮೈಸೂರಿನವರೆಗೂ ವಿಸ್ತಾರಗೊಂಡಿದೆ.ಹಾಸನ ಜಿಲ್ಲೆಯ ಶಾಸಕ ಪ್ರೀತಂ ಗೌಡಗೆ ಟಕ್ಕರ್ ಕೊಡಲು ಮುಂದಾದ ಭವಾನಿ ರೇವಣ್ಣ ಹಾಸನದ ಮತದಾರರಿಗೆ ಮೈಸೂರಿನಲ್ಲಿ ಬಾಡೂಟ ಹಾಕಿಸಿದ್ದಾರೆ.ಭವಾನಿ ಹುಟ್ಟೂರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಭಾನುವಾರ ಭರ್ಜರಿ ಔತಣ ಕೂಟ ಆಯೋಜನೆ ಮಾಡಿದ್ದರು. ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್ ಅವರ ಮನೆಯಲ್ಲಿ ಔತಣ ಕೂಟ ಆಯೋಜನೆಯಾಗಿತ್ತು. ರೇವಣ್ಣ ದಂಪತಿಯೇ ಮುಂದೆ ನಿಂತು