ಬೆಂಗಳೂರು : ಬಿಜೆಪಿ ಪಾಳಯದಲ್ಲಿ ಲಕ್ಷ್ಮಣ್ ಸವದಿಗೆ ಡಿಸಿಎಂ ಪಟ್ಟ ಕೊಟ್ಟಿದ್ದಕ್ಕೆ ಶಾಸಕರು ಸಿಡಿಮಿಡಿಗೊಂಡಿದ್ದು, ಇನ್ನೂ ಸವದಿ ಮತ್ಸರ ಶಮನವಾಗಿಲ್ಲ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಬಹುತೇಕ ಶಾಸಕರಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಅಸಮಾಧಾನಿತ ಶಾಸಕರಿಗೆ ಬಾಲಚಂದ್ರ ಹಾಗೂ ಉಮೇಶ್ ಕತ್ತಿ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. 7 ಶಾಸಕರು ಸೇರಿದಂತೆ ಜಿಲ್ಲೆಯ ಪ್ರಭಾವಿ ನಾಯಕರು ಸಾಥ್ ನೀಡಿದ್ದು, ಪಕ್ಷದ ಮಟ್ಟದಲ್ಲಿ ಯಾವ ರೀತಿ ವಿರೋಧ ಮಾಡಬೇಕೆಂದು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ