ಕಣ್ಣಿಗೆ ಕಾಣುವ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳ ಜೋಡಾಟ ಆಕಾಶದಲ್ಲಿ ನಡೆಯುತ್ತಿದ್ದು, ಮಾರ್ಚ್ 2 ರಂದು ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಎರಡೂ ಗ್ರಹಗಳು ಸುಂದರವಾಗಿ ಗೋಚರವಾಗಲಿವೆ ಎಂದು ಭೌತಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ. ಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಶುಕ್ರ ಗ್ರಹವು 20.5 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಗುರು ಗ್ರಹ 86 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಗುರು ಗ್ರಹದ ಗಾತ್ರ ಶುಕ್ರ ಗ್ರಹಕ್ಕಿಂತ 1,400 ಪಟ್ಟು