ಎಮ್ಮೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು. ಆದರೆ, ನೀರು ಕುಡಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಪರೋಕ್ಷವಾಗಿ ಶಾಸಕರನ್ನು ಎಮ್ಮೆಗೆ ಹೋಲಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶಾಸಕರು ಒಂದು ಬಾರಿ ಹಾಜರಾತಿ ಹಾಕುವ ಪ್ರಕ್ರಿಯೆ ಇದೆ. ಆದರೆ, ಮೂರು ಬಾರಿ ಹಾಜರಾತಿ ಹಾಕುವ ಪ್ರಕ್ರಿಯೆ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ಹೀಗೆ ಮಾಡಿದರೆ ಸದನದಲ್ಲಿ ಬಹುತೇಕ ಶಾಸಕರು ಹಾಜರಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು. ಶ್ರೀನಿವಾಸ್