ಮಂಡ್ಯ : ಇಷ್ಟು ದಿನಗಳ ಕಾಲ ಮಾತಿನ ಮೂಲಕ ಜೆಡಿಎಸ್ನಲ್ಲಿ ಬಂಡಾಯ ಸೂಚಿಸುತ್ತಿದ್ದ ಕೆ.ಆರ್. ಪೇಟೆ ನಾಯಕರು, ಇದೀಗ ಬಂಡಾಯ ಸಭೆ ನಡೆಸುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರದ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.ಇಷ್ಟು ವರ್ಷಗಳ ಕಾಲ ಕೊನೆಯ ಹಂತದಲ್ಲಿ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದ ಕುಮಾರಸ್ವಾಮಿ ಈ ಬಾರಿ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ