ಕಲಬುರಗಿ ಜಿಲ್ಲೆಯ ಏಳು ತಾಲೂಕುಗಳ 168 ವಾರ್ಡುಗಳಿಗಾಗಿ ಇಂದು ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. ಚಿತ್ತಾಪುರ ತಾಲೂಕಿ ಶಹಾಬಾದ ನಗರಸಭೆಯ 27 ವಾರ್ಡುಗಳಿಗಾಗಿ ಇಂದು ನಡೆದ ಮತದಾನದಲ್ಲಿ 11743 ಪುರುಷರು, 12011 ಮಹಿಳೆಯರು ಹೀಗೆ ಒಟ್ಟು 23754 ಮತದಾರರು ಮತ ಚಲಾಯಿಸಿದ್ದು, ಶೇ. 53.22 ರಷ್ಟು ಮತದಾನವಾಗಿದೆ. ಸೇಡಂ ತಾಲೂಕಿನ ಸೇಡಂ ಪುರಸಭೆಯ 23 ವಾರ್ಡುಗಳಿಗಾಗಿ