ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ಗೆ ಇವತ್ತೇ ಕೊನೆಯ ದಿನವಾಗಿದೆ ಎಂದು ಫೇಸ್ಬುಕ್ ಪೇಜ್ನಲ್ಲಿ ಜೀವ ಬೆದರಿಕೆ ಸಂದೇಶ ಪೋಸ್ಟ್ ಮಾಡಲಾಗಿದೆ. ಮಂಗಳೂರಿನ ಮುಸ್ಲಿಂ ಸಂಘಟನೆಯ ಹೆಸರಲ್ಲಿ ಫೇಸ್ಬುಕ್ ಪೇಜ್ನಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ಗೆ ಜೀವ ಬೆದರಿಕೆಯೊಡ್ಡಲಾಗಿದೆ. ಆತನೊಬ್ಬ ಭಯೋತ್ಪಾದಕ ಎಂದು ಹೀಯಾಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಭಾಕರ್ ಸತ್ತ ಮೇಲೆ ಆತನ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಿರೋ ಅಥವಾ ಕೇಸರಿ ಧ್ವಜ ಹಾರಿಸುತ್ತಿರೋ ಎಂದು ಪ್ರಶ್ನಿಸಲಾಗಿದೆ.