ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿರೋದಕ್ಕೆ ಭಾರೀ ವಿರೋಧ ವ್ಯಕ್ತವಾಗತೊಡಗಿದೆ.ಮರುನಾಮಕರಣಕ್ಕೆ ಯಾವುದೇ ಬೆಲೆ ಇಲ್ಲ. ಹೀಗಂತ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಿಡಿಕಾರಿದ್ದಾರೆ. ಕಲ್ಯಾಣ ಕರ್ನಾಟಕ ಅಂತ ಮರು ನಾಮಕರಣ ಮಾಡಿರೋದು ಸರಕಾರ. ಆದರೆ ಸರಕಾರದ ಈ ಕ್ರಮಕ್ಕೆ ಅಸಲಿಗೆ ಮಾನ್ಯತೆಯೇ ಇಲ್ಲ ಅಂತ ಹೇಳಿದ್ದಾರೆ.ಸಂಸತ್ ನಲ್ಲಿ ಅನುಮೋದನೆಗೊಳ್ಳಬೇಕು. ಅದಕ್ಕೆ ಸಂವಿಧಾನ ತಿದ್ದುಪಡಿಯಾದಾಗ ಮರುನಾಮಕರಣ ಸಾಧ್ಯ. ಆದರೆ ಸರಕಾರ ಈಗ ಮಾಡಿರೋ ಕಲ್ಯಾಣ ಕರ್ನಾಟಕ