ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 70 ಸಾವಿರಕ್ಕೂ ಹೆಚ್ಚು ಕೂಸೆಕ್ ನೀರನ್ನು 20 ಗೇಟ್ಗಳ ಮೂಲಕ ನದಿಗೆ ಬಿಡಲಾಗಿದೆ. ಇದರಿಂದ ಕಂಪ್ಲಿ ಪಟ್ಟಣದ ಬಳಿಯ ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಗೆ ಕೆಲವು ಅಡಿಯಷ್ಟೇ ಬಾಕಿಯಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ ಕೋಟೆಯ ತುಂಗಾಭದ್ರ ನದಿಯಲ್ಲಿ ಉಕ್ಕಿ ಬರುತ್ತಿರುವ ನೀರನ್ನು ಕಣ್ತುಂಬಿಕೊಳ್ಳಲು ತಂಡ ತಂಡವಾಗಿ ನದಿಯತ್ತ ಜನ ದಾಪುಗಾಲಿಡುತ್ತಿದ್ದಾರೆ. ಕಳೆದ ನಾಲ್ಕು