ಸಾಮಾನ್ಯ ಪ್ರಯಾಣದ (ಜನರಲ್ ಟಿಕೆಟ್) ರೈಲ್ವೆ ಟಿಕೆಟ್ಗಳ ಮೇಲೆ ಕನ್ನಡದಲ್ಲಿ ಮಾಹಿತಿ ನೀಡುವುದಾಗಿ ಕೇಂದ್ರ ರೈಲ್ವೆ ಇಲಾಖೆ ಘೋಷಣೆ ಮಾಡಿದ ಹಲವು ತಿಂಗಳ ಬಳಿಕ ಕನ್ನಡದಲ್ಲಿ ಮುದ್ರಿಸಿದ ಟಿಕೆಟ್ಗಳನ್ನು ವಿತರಿಸುತ್ತಿವೆ. ಇಲ್ಲಿನ ನೈಋತ್ಯ ರೈಲ್ವೆಯ ಪ್ರಯಾಣದ ಟಿಕೆಟ್ಗಳಲ್ಲಿ ಇನ್ನು ಮುಂದೆ ಇಂಗ್ಲಿಷ್ ಹಾಗೂ ಹಿಂದಿಯೊಂದಿಗೆ ಕನ್ನಡ ಭಾಷೆಯೂ ರಾರಾಜಿಸಲಿದೆ. ಮೈಸೂರು-ಬೆಂಗಳೂರು-ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಕನ್ನಡದಲ್ಲಿ ರೈಲ್ವೆ ಟಿಕೆಟ್ ವಿತರಿಸಲಾಗಿದೆ. ಸ್ವಯಂ ಚಾಲಿತ ಟಿಕೆಟ್ ಮಾರಾಟ ಯಂತ್ರಗಳಿಂದ ಪಡೆಯುವ ಟಿಕೆಟ್ಗಳಲ್ಲಿ