ಸಾಂಸ್ಕೃತಿಕ ಸಿರಿವಂತ ಹಾಗೂ ಸಾಮರಸ್ಯದ ನೆಲವಾಗಿರುವ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ ಪ್ರಮಾಣದಲ್ಲಿ ಸಾಹಿತ್ಯಾಸಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆಗೆ 21030 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಂತ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದ್ದಾರೆ.ಈ ಹಿಂದೆ ನಡೆದ ರಾಯಚೂರಿನಲ್ಲಿ 12500, ಮೈಸೂರಿನಲ್ಲಿ 13000 ಹಾಗೂ ಧಾರವಾಡದಲ್ಲಿ 13500 ಜನ ನೋಂದಣಿ