ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವೆ ಗಡಿ ವಿವಾದ ಸಂಬಂಧ ಬೊಮ್ಮಾಯಿ ವೀಕ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಗೋವಿಂದ ಕಾರಜೋಳ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಅವನೇ 5 ವರ್ಷ ಇದ್ದನಲ್ಲ ಏನು ಮಾಡುತ್ತಿದ್ದ. ಯಾಕೆ ಆಗ ಗಡಿ ಸಮಸ್ಯೆ ಸರಿಪಡಿಸಲಿಲ್ಲ. ಸುಮ್ಮನೆ ಬಾಯಿ ಚಪಲಕ್ಕೆ ಏನೇನೋ ಮಾತನಾಡಬಾರದು. 60 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸಮಸ್ಯೆ ಸರಿಪಡಿಸಬಹುದಿತ್ತು. ಅಂದಿನ ಕಾಂಗ್ರೆಸ್ ತ್ರಿಬಲ್ ಇಂಜಿನ್ ಸರ್ಕಾರ ಯಾಕೆ ಮಾಡಲಿಲ್ಲ.