ಹುಬ್ಬಳ್ಳಿ: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಳಸಾ ಬಂಡೂರಿ, ಮಹದಾಯಿ ಅಥವಾ ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಗಳ ವಿಷಯವೇ ಪ್ರಮುಖವಾಗಿತ್ತು. ಆದ್ರೆ ಇಲ್ಲಿ ಇವು ಯಾವ ವಿಷಯವು ಪರಿಣಾಮ ಬೀರಿಲ್ಲ ಲಿಂಗಾಯತರು ಮಾತ್ರ ಕಮಲಕ್ಕೆ ಜೈ ಎಂದಿದ್ದಾರೆ.