ಬೆಂಗಳೂರು: ಬಿಜೆಪಿಯನ್ನು ಕೋಮುವಾದಿಗಳು ಎಂದು ಜರೆದ ಮಾಜಿ ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.ಗುಜರಾತ್, ಪುಣೆಯಲ್ಲಿ ಜನರನ್ನು ಗುಳೆ ಎಬ್ಬಿಸಿದವರು ನೀವು. ಲಕ್ಷಾಂತರ ಸಿಖ್ಖರ ಮಾರಣಹೋಮ ಮಾಡಿದ ಪಕ್ಷದವರಾದ ನಿಮ್ಮಿಂದ ನಾವು ಜಾತ್ಯಾತೀತೆಯ ಪಾಠ ಹೇಳಿಸಿಕೊಳ್ಳಬೇಕಾ? ನಿಜವಾದ ಕೋಮುವಾದಿಗಳು ನೀವೇ ಎಂದು ಬಿಜೆಪಿ ತಿರುಗೇಟು ನೀಡಿದೆ.ದೇವೇಗೌಡರು ಮತ್ತು ಕಾಂಗ್ರೆಸ್ ಆಗಾಗ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ನಾವು ಸಮ್ಮಿಶ್ರ ಸರ್ಕಾರ ರೂಪಿಸಿದೆವು ಎನ್ನುತ್ತಾರೆ. ವಿಪರ್ಯಾಸವೆಂದರೆ