ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು 2024-25 ನೇ ಸಾಲಿನ ಬಜೆಟ್ ಮಂಡಿಸಿದ್ದು, ಯಾವೆಲ್ಲಾ ಯೋಜನೆಗಳಿಗೆ ಹಣ ನೀಡಿದ್ದಾರೆ ಎಂಬ ವಿವರಗಳು ಇಲ್ಲಿವೆ ನೋಡಿ. ಈ ಬಾರಿ ಸಿಎಂ ಸಿದ್ದರಾಮಯ್ಯ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಇದರಲ್ಲಿ ವಾಣಿಜ್ಯ ತೆರಿಗೆ ರೂಪದಲ್ಲಿ 11 ಸಾವಿರ ಕೋಟಿ ರೂ.,ಅಬಕಾರಿ ಇಲಾಖೆಯಿಂದ 38,525 ಕೋಟಿ, ನೋಂದಣಿ ಮುದ್ರಾಂಕ ಇಲಾಖೆಯಿಂದ 26000 ಕೋಟಿ, ಮೋಟಾರು ವಾಹನ ತೆರಿಗೆಯಿಂದ 13,000 ಕೋಟಿ, ಇತರೆ ಮೂಲ ತೆರಿಗೆ ರೂಪದಲ್ಲಿ 2,368 ಕೋಟಿ ರೂ. ಆದಾಯ ಬಂದಿದೆ.